ಶ್ರಾವಣದ ಕೊನೆಯ ಮಂಗಳವಾರ ಪುಟ್ಟ ದೇವತೆ ಒಬ್ಬಳು ಜನಿಸಿದಳು. ನನ್ನ ಬದುಕಿನ ಅತೀ ಯಾತನೆಯ ಕ್ಷಣವೊಂದು ನಗುವಾಗಿ ಪರಿವರ್ತನೆಯಾಯಿತು. ಅಸಾಧ್ಯವಾದ ಗೆಲುವೊಂದು ದಕ್ಕಿದ ದಿನ ಅದು.
ಕಂದಾ...
ನೀನು ನನ್ನ ಜೀವನ ಪ್ರೀತಿ, ಬದುಕುವ ಕಾರಣ. ನನ್ನ ಗೆಲ್ಲಿಸಿದಾಕೆ. ದಿನಗಳು ಕ್ಷಣಗಳಾಗಿ ಕಳೆಯುತ್ತಿವೆ. ನಿನ್ನ ಹೊರತಾಗಿ ಬದುಕಿಗೆ ಮತ್ತೇನು ಬೇಕಿಲ್ಲ ಎನಿಸುತ್ತಿದೆ. ಯಾವ ಸೋಲು ಯಾವ ಗೆಲುವು ದೊಡ್ಡದಲ್ಲ, ನಿನ್ನ ಅಳುವು ಮನಸ್ಸನ್ನು ತೀವ್ರವಾಗಿ ಸಂತೈಸುವ ಯಾವುದೋ ಸಂಗೀತದಂತೆ.
ಈಗೀಗಾ ನೀನು ನಗುತ್ತಿಯಲ್ಲ ಅದರಲ್ಲಿ ನನ್ನ ಉಸಿರೆ ಇದೆ ಎನಿಸುತ್ತಿದೆ. ನಿನಗಾಗಿ ನನ್ನ ಉಸಿರ ಬಿಗಿ ಹಿಡಿದು ಬದುಕಿಬಿಡುವೆ ಬದುಕಿನೆಲ್ಲ ಏರಿಳಿತಗಳ ಹೊರತಾಗಿಯೂ...
ನಿನ್ನ ಬದುಕಿಗೆ ನೆರಳಾಗಿ ನಿನ್ನ ಕನಸಿಗೆ ಜೊತೆಯಾಗಿ, ನನ್ನ ಬದುಕ ಕೊನೆಯ ತನಕ ನಿನ್ನನ್ನು ಪ್ರೀತಿಸುತ್ತಲೇ ಇರುತ್ತೇನೆ.
ನಿನ್ನ ಹೆಸರು ಸೀತೆಯ ಇನ್ನೊಂದು ಹೆಸರು ನೀನು ಅವಳಂತೆ ಎಂತಹ ಕಷ್ಟದಲ್ಲೂ ನೀನು ನೀನಾಗಿಯೆ ಇರಬೇಕು.
ತುಂಬಾ ಪ್ರೀತಿ ಮುದ್ದು ಮೈಥಿಲಿ...
No comments:
Post a Comment