Friday 18 July 2014

ಧರ್ಮ ಜ್ಯೋತಿ ಬೆಳಗಿದವನ ಎದುರು ಕುಳಿತು...





ಶಿವನೇ  ಮಗುವಾಗಿ
ಬಾಲ ಸೂರ್ಯನನ್ನೇ ಕಣ್ಣಾಗಿಸಿ
ದಾರಿಯನ್ನು ಹುಡುಕುತ್ತ ಭಾರತಾಂಬೆಯ ಮಡಿಲಿಗೆ ಬಂದನಂತೆ...

ಭಾರತಿಯೇ ತಾಯಿಯಾಗಿ
ದೇಶಪ್ರೇಮವನ್ನೇ ಜೀವವಾಗಿಸಿ
ಧರ್ಮ ಜ್ಯೋತಿಯ ಪ್ರಭೆಯಾಗಿ ಬೆಳಗು ಎಂದಳಂತೆ..

ನರೇಂದ್ರ ಬೆಳೆದು ಸಾವಿರಾರು ಮೈಲಿ ದೂರ ಸಾಗಿ
ಧರ್ಮದ ವಾಹಕ ಶಕ್ತಿಯಾಗಿ - ವಿವೇಕದ ಆನಂದವಾಗಿ
ಜಗತ್ತಿಗೇ ಧರ್ಮವನ್ನು ಬೆಳಗಿಸಿದನಂತೆ...







ಧರ್ಮವನ್ನು ಬೆಳಗಿಸಿದವನ ದಿವ್ಯ ಪ್ರತಿಮೆಯ ಎದುರು ಕುಳಿತು ಆ ದಿವ್ಯ ತೇಜಸ್ವಿಯನ್ನು ದಿಟ್ಟಿಸಿದಾಗ ಯಾಕೆ
ಮತ್ತೊಬ್ಬ ವಿವೇಕಾನಂದ ಹುಟ್ಟಲಿಲ್ಲ ಎನಿಸಿತು. ಮರುಘಳಿಗೆ ವಿವೇಕಾನಂದ ಹುಟ್ಟಿದ್ದಲ್ಲ, ಬೆಳೆದದ್ದು, ಬೆಳೆಸಿಕೊಂಡಿದ್ದು ಎನಿಸಿತು.

ನಿನ್ನೆದುರು ಕುಳಿತು ಏನು ಕೇಳಲಿ ನಿನ್ನ ಬಳಿ ಇರುವುದನ್ನು ತಾನೇ ಕೇಳಬೇಕು?

ನಿನ್ನ ದಿವ್ಯ ತೇಜಸ್ಸನ್ನು ಕೇಳಲೇ?

ನಿನ್ನೊಳಗಿನ ದೇಶ ಭಕ್ತಿಯನ್ನು ಕೇಳಲೇ?

ನೀನೇನೋ ಕೊಡುಗೈ ದಾನಿಯೇ.. ಕೊಟ್ಟೂಬಿಟ್ಟಿಯ....!

ಆದರೆ ನೀ ಕೊಟ್ಟಿದ್ದನ್ನು ನನ್ನೊಳಗೆ ಬಿಟ್ಟುಕೊಳ್ಳುವ ಶಕ್ತಿ ನನಗೆಷ್ಟಿದೆ?

ನಿನ್ನ ಆ ಶುದ್ದ ಕಣ್ಣುಗಳನ್ನು ನೋಡಿದರೆ ಸಾಕು ಅದ್ಯಾವುದೋ ದಿವ್ಯ ತೇಜಸ್ಸು ದೇಹವನ್ನಾವರಿಸುತ್ತದೆ ನಿಜ...

ಆದರೆ ಅದು ನಿನ್ನೆದುರು ಇರುವಾಗ ಮಾತ್ರ...

ನಿನ್ನೆದುರಿಂದ ಎದ್ದ ಮರುಕ್ಷಣ ಅದನ್ನು ದೇಹದಲ್ಲಿಟ್ಟುಕೊಳ್ಳುವ ಶಕ್ತಿ ನನಗಿಲ್ಲದಿರುವುದು ನನ್ನ ಬಲಹೀನತೆ...

ನಾನೋ ಸಾಮಾನ್ಯರಲ್ಲಿ ಸಾಮಾನ್ಯ...

ನಿನ್ನ ಸುತ್ತ ಹತ್ತು ಪ್ರದಕ್ಷಣೆ ಹಾಕಿ ಇಪ್ಪತ್ತು ಬಾರಿ ನಮಸ್ಕಾರ ಮಾಡಿ ಅಡ್ಡಬಿದ್ದೇನು...

ಅಷ್ಟೇ.........

ಮತ್ತೇನು ಮಾಡಲು ಸಾಧ್ಯ ನನ್ನಿಂದ?

ನೀನು ಕೊಡುವುದು ಪರಿಪೂರ್ಣ ದೇಶಭಕ್ತಿಯನ್ನ, ಧರ್ಮದ ಆತ್ಮ ಶಕ್ತಿಯನ್ನ - ಆದರೆ ನನಗೆ ಬೇಕಿರುವುದು...?

ಈಗ ಉಳಿದಿರುವುದು ಒಂದೇ ದಾರಿ ನನಗೆ ಬೇಕಿರುವುದನ್ನೇ ಬದಲಾಯಿಸಿಕೊಳ್ಳಬೇಕು...

ಆ ಶಕ್ತಿಯಾದರೂ ಇದೆಯಾ ನನ್ನಲ್ಲಿ..?

ಇದ್ದಂತಿಲ್ಲ...

ಓ ದಿವ್ಯ ತೇಜಸ್ವಿಯೇ....!

ನೀ ಕೊಡುವುದನ್ನು ನನ್ನೊಳಗೆ ಇಟ್ಟುಕೊಳ್ಳುವ ಬುದ್ಧಿ ಕೊಡು ಎಂದು ಕೇಳಬೇಕೆನಿಸಿತು....
ಆದರೆ ಬುದ್ಧಿ ಇರುವುದು ನನ್ನ ಹತೋಟಿಯಲ್ಲೇ ಅಲ್ವಾ... ನಾನೇನು ಕೇಳಲಾರೆ ಸುಮ್ಮನೆ ದಿಟ್ಟಿಸುವೆ
ನಿನ್ನ ಅದೇ ಪ್ರಜ್ವಲಿಸುವ ಕಣ್ಣುಗಳನ್ನು ನನ್ನೊಳಗೂ ಒಂದು ಅವ್ಯಕ್ತ ಶಕ್ತಿ ಬರುವುದಾದರೆ ಬರಲಿ
ಕಡೆಯ ಪಕ್ಷ ನನ್ನಂತರಾತ್ಮವಾದರೂ ಬೆಳಗಲಿ ಜ್ಞಾನವೆಂಬ ಬೆಳಕಿನಿಂದ..

5 comments:

  1. ಮನೋ ಶಕ್ತಿಯನ್ನು ಉದ್ಧೇಪಿಸುವ ಮತ್ತು ಮನುಜನಾಗಿ ನಿಜ ಬಾಳುವೆ ನಡೆಸುವತ್ತ ಸದಾ ಪ್ರೇರಕ ಶಕ್ತಿ ಮೂಲ ಸ್ವಾಮಿ ವಿವೇಕಾನಂದರು.
    ನಿಮ್ಮ ಈ ಬರಹದಿಂದ ನಾವು ಪುಳಕಿತರಾದೆವು.

    ಅವರು ಕೈ ಕಟ್ಟಿಕೊಂಡು ಎದೆ ಉಬ್ಬಿಸಿ ನಿಂತ ಆ ದಿವ್ಯ ಭಂಗಿ ನೋಡಿದ ಕೂಡಲೆ ಅದೆಂತದೋ ರೋಮಾಂಚನ.

    ReplyDelete
  2. ನಿಜಕ್ಕೂ ... ಸರ್ವಕಾಲಿಕ ಸತ್ಯ, ಭಾರತಾಂಬೆಯ ವರಪುತ್ರರ ಪ್ರಾತಃ ಸ್ಮರಣೆ ಎಲ್ಲರೂ ಮಾಡಬೇಕು.

    ReplyDelete
  3. ಬರಹದ ಸಾಲು ಸಾಲುಗಳೂ ಮಹತ್ವಪೂರ್ಣವಾದವುಗಳು.. ಸೂಪರ್

    ReplyDelete
  4. ಆ ಒಂದು ತೇಜಸ್ಸು ಅವರ ಮೊಗದಲ್ಲಿ... ಆ ಒಂದು ದಿವ್ಯ ಜ್ಯೋತಿ ಅವರ ಕಣ್ಣಲ್ಲಿ... ವಿವೇಕ ಎಂದರೆ ಬುದ್ದಿವಂತಿಕೆ, ಬುದ್ದಿ, ಜ್ಞಾನ, ತಿಳುವಳಿಕೆ, ದೂರದೃಷ್ಟಿ ಇವುಗಳಿಗೆ ಹೆಸರೆ ವಿವೇಕಾನಂದರು. ಅವರಿಂದನೆ ಆ ವಿವೆಕ ಎನ್ನು ಶಬ್ಧಕ್ಕೊಂದು ಅರ್ಥ ಬಂದಿದೆ ಎಂದರೆ ತಪ್ಪಗಲಾರದು. ವಿವೇಕ ಎಂದ ಕೂಡಲೆ ನಮ್ಮ ಮನಸ್ಸಿನಲ್ಲೇನೊ ಒಂದು ರೀತಿಯ ಸಂಚಾರ. ಅವರ ಬಗ್ಗೆ ಬರೆದ ನಿಮ್ಮ ಬರಹ ಅರ್ಥ ಪೂರ್ಣವಾಗಿದೆ. ಹೀಗೆ ಬರೆಯುತ್ತಿರಿ... ಶುಭವಾಗಲಿ.

    ReplyDelete
  5. :) ಚಂದಾಯ್ದು ಹುಂ..

    ReplyDelete