Tuesday 1 July 2014

ನಾನೆಂಬ ಮಹಾನ್ ಸ್ವಾರ್ಥಿಯ ಕನಸು..

ತೊನೆಯಬೇಕು ನಾನು ಶುಭ್ರ ಸಾಗರವಾಗಿ...
ನಕ್ಕು ಹೊಳೆಯಬೇಕು ಕಡಲ ಮುತ್ತಾಗಿ...
ಸಲಿಲದ ಆಳ ಅಗಲವ ಅಳೆಯಬೇಕು ಮೀನಾಗಿ... 
ಯಾರಿಗಾಗಿಯೂ ಅಲ್ಲ... 
ಕೇವಲ ನನಗಾಗಿ ಮತ್ತು ನಾನು ನಾನಾಗಿ .....

ಒಮ್ಮೆ ಹಾರಬೇಕು ಮುಗಿಲೆತ್ತರಕ್ಕೆ...
ಹಕ್ಕಿಗೆ ಸ್ಪರ್ಧೆ ಕೊಡಲಲ್ಲ... 
ಯಾವ ದಾಖಲೆಗೂ ಅಲ್ಲ...
ಸ್ವಾತಂತ್ರ‍್ಯದ ಸಾಕ್ಷಿಯಾಗಿ...
ಹಕ್ಕಿ ಮನಸಿನ ಖುಷಿಗಾಗಿ.....

ಅರಳಬೇಕು ನಾನು ಪರಿಮಳದ ಹೂವಾಗಿ.. 
ಯಾವುದೋ ಗುಡಿ ಶಿಲೆಯ ಅಲಂಕರಿಸಲಲ್ಲಾ...
ಯಾರದೋ ಮುಡಿಯಲ್ಲಿ ಬಾಡಲಲ್ಲಾ... 
ಇನ್ಯಾರದೋ ಸಂದೇಶ ಭಾಷಾಂತರಿಸಲಲ್ಲ... 
ನನ್ನಾತ್ಮ ಸುಮದ ಚೆಂದವ ಕಾಣುವುದಕ್ಕಾಗಿ... 

ಒಮ್ಮೆ ಅಲೆಮಾರಿಯಂತೆ ಅಲೆಯಬೇಕು... 
ಯಾರನ್ನೂ ಹುಡುಕುವುದಕ್ಕಲ್ಲ... 
ನನ್ನನ್ನು ಯಾರಿಗೋ ಪರಿಚಯಿಸುವುದಕ್ಕೂ ಅಲ್ಲ... 
ನನ್ನೊಳಗಿನ ನನ್ನನ್ನು ಕಂಡುಕೊಳ್ಳುವುದಕ್ಕಾಗಿ...
ಅರಿವಿನ ಜೇನನ್ನು ಸವಿಯುವುದಕ್ಕಾಗಿ.....

6 comments:

  1. ಒಮ್ಮೆ ಅಲೆಮಾರಿಯಂತೆ ಅಲೆಯಬೇಕು...
    ಯಾರನ್ನೂ ಹುಡುಕುವುದಕ್ಕಲ್ಲ... Mast Mast ... Nice Sandhya.. .... naanu tumba ಸ್ವಾರ್ಥಿ​ ನೆ ​...

    ReplyDelete
  2. kanasu tumba madhuravaaagide.....
    estu aarogyakara kanasu ninnadu....
    parimalada hoovagi olavina masada naguvaagi....
    sada aleyutta..... bareyutta...... ille odadkondiru..... blaagilu beleyali......
    olle chanda untu marayre....

    ReplyDelete
  3. ವಾ..ತೊನೆಯಬೇಕು..ಇಲ್ಲೇ ಗೆದ್ದಿರಿ...
    "ಸಲಿಲದ ಆಳ ಅಗಲವ ಅಳೆಯಬೇಕು ಮೀನಾಗಿ"..ಆಹಾ..ಸಲಿಲವನ್ನು ಅದೆಷ್ಟು ಛಂದಗಾಣಿಸಿದ್ದೀರಿ...
    ನನ್ನಾತ್ಮ ಸುಮ ಕೂಡಾ ಇಷ್ಟವಾಯಿತು....ಬರೆಯುತ್ತಿರಿ...
    ಹಾಂ ಅಲ್ಲಿ ಮೊದಲ ಪ್ಯಾರಾ ಮಾತ್ರ ಬೇರೆ ಥರ ಇದೆ ಉಳಿದವುಗಳಿಂತ ನಿರುಪಣೆಯಲ್ಲಿ..ಅದೇಕೆ ಹಾಗೆ ??ತಿಳಿಯುತ್ತಿಲ್ಲ...
    ವಂದನೆಗಳು..
    ನಮಸ್ತೆ :)

    ReplyDelete
  4. @sandhya hegde sandhyakka tumbane chanagiddu....rashi ishta atu..prati salu odidashtu odsgyattu.....hinge barita iri....best of luck....

    ReplyDelete
  5. 'ನನ್ನಾತ್ಮ ಸುಮ' ತುಂಬಾ ಒಳ್ಳೆಯ ಕಲ್ಪನೆ.
    ಸಂಪೂರ್ಣ ಸ್ವಯಂ ಅನ್ವೇಷಕ ಕವನವಿದು, ನಮ್ಮದೂ ನಿಮ್ಮದೂ...

    ತಮ್ಮ ಪರಿಚಯವಾದದ್ದು ಖುಷಿಕೊಟ್ಟಿತು, ತಮ್ಮ ಬ್ಲಾಗಿನ ಲಿಂಕ್ ಸಿಕ್ಕಿದ್ದೂ ಸಹ.
    ಇದೀಗ ನಿಮ್ಮ ಈ ಬ್ಲಾಗನ್ನು ಫೇಸ್ ಬುಕ್ಕಿನ ಸಾಹಿತ್ಯ ಸಾಗರವಾದ 3K ಗುಂಪಿನಲ್ಲಿ - ಕಾವ್ಯ ವಿಭಾಗದಲ್ಲಿ ಅಕ್ಕರೆಯಿಂದ ಹಂಚಿಕೊಂಡಿದ್ದೇನೆ:

    https://www.facebook.com/groups/kannada3K/permalink/435285689889320/

    finally :
    ನನಗೂ ಅನಿಸುವುದು:
    "ಒಮ್ಮೆ ಅಲೆಮಾರಿಯಂತೆ ಅಲೆಯಬೇಕು... "

    ReplyDelete
  6. ಕವಿತೆ ಹೊರತು ನೀವು ಸ್ವಾರ್ಥಿ ಅಲ್ಲ ಅಲ್ವ...

    ReplyDelete