ನಿಂಗೆ ಹೀಗೆಲ್ಲ ಹೇಳಬಹುದಾ ಗೊತ್ತಿಲ್ಲ. ಆದರೆ
ಯಾರನ್ನೂ ತುಂಬಾ ಪ್ರೀತಿಸಬೇಡ - ಪ್ರೀತಿ ನಿನ್ನ ಬಲಹೀನತೆ ಅಲ್ಲ.
ಯಾರನ್ನೂ ತುಂಬಾ ದ್ವೇಷಿಸಬೇಡ - ದ್ವೇಷದ ಕಿಡಿ ನಿನ್ನ ಒಳಗೊಳಗೇ ಸುಟ್ಟಿತು.
ಯಾರನ್ನೂ ತುಂಬಾ ನೋಯಿಸಬೇಡ -ನಿನ್ನೊಳಗೊಂದು ಪಾಪ ಪ್ರಜ್ಞೆ ಕಾಡಿತು.
ಯಾರ ಪ್ರೀತಿಯನ್ನೂ ತಿರಸ್ಕರಿಸಬೇಡ - ಬೇಕೆಂದಾಗ ಪ್ರೀತಿ ಸಿಗದೇ ಇರಬಹುದು
ಯಾರನ್ನೋ ಮೆಚ್ಚಿಸುವ ಹುಚ್ಚಿಗೆ ಬೀಳಬೇಡ - ಅಲ್ಲಿ ನೀನೇ ಮರೆಯಾಗಬಹುದು.

ಅಮ್ಮ ಮತ್ತೆ ಹೀಗಿರಬೇಕು,
ನೀನೊಂದು ಹಕ್ಕಿಯಂತೆ ಸ್ವಚ್ಚಂದವಾಗಿ ಇದ್ದುಬಿಡು- ಯಾವುದೂ ನಿನ್ನನ್ನು ನಿಲ್ಲಿಸದಿರಲಿ.
ನಿನ್ನನ್ನು ಹೆಚ್ಚು ಪ್ರೀತಿಸು - ಪ್ರೀತಿ ನಿನ್ನ ಶಕ್ತಿಯಾಗಲಿ
ದ್ವೇಷದ ಯೋಚನೆಯೇ ಬೇಡ -ದ್ವೇಷದಿಂದ ನಿಂಗೇನೂ ಆಗುವುದಿಲ್ಲ.
ಯಾರೋ ಪ್ರೀತಿಸಿದರೆ ಸುಮ್ಮನೆ ಆ ಕ್ಷಣಕ್ಕೆ ಅನುಭವಿಸಿಬಿಡು -ನಾಳೆಗಳು ನಿಂಗೆ ಗೊತ್ತಿಲ್ಲ.
ನಿನ್ನ ಶಕ್ತಿ ಮತ್ತು ಬಲಹೀನತೆ ನಿನ್ನೊಳಗೆ ಇರಲಿ - ಯಾರಿಗೂ ನಿನ್ನನ್ನು ಅರ್ಥಮಾಡಿಸುವ ಅಗತ್ಯವಿಲ್ಲ.
ನೀನು ನೀನಾಗು ನಿನ್ನ ಬದುಕು ಮಾತ್ರ ಮುಖ್ಯ ಇನ್ಯಾರು ಅಲ್ಲ.

ಅಮ್ಮ ಇದು ಸ್ವಾರ್ಥವಲ್ಲವಾ?
ನಿನ್ನ ಪ್ರೀತಿಸಿದರೆ ಮಾತ್ರ ನೀನು ಬದುಕಬಲ್ಲೆ ನೀನೇ ಇಲ್ಲದೆ ಯಾರು ಪ್ರೀತಿಸಿದರೇನು? ನಿನ್ನ ಜೊತೆ ಎಲ್ಲ ಸಂದರ್ಭದಲ್ಲಿಯೂ ನೀ ಮಾತ್ರ ಇರಬಲ್ಲೆ.
ನಿನ್ನ ಕಣ್ಣೀರ ಯಾರೋ ಒರೆಸುತ್ತಾರೆ ಎಂದು ಅಳುವ ಅಗತ್ಯವಿಲ್ಲ ಅಥವಾ ಯಾರೋ ಕಣ್ಣೀರ ನೋಡಿ ನಗುತ್ತಾರೆ ಎಂದು ಭಾವವನ್ನು ಮುಚ್ಚಿಡುವ ಅವಶ್ಯಕತೆಯೂ ಇಲ್ಲ. ನೀನು ನೀನಾಗಿ ಇರು ನಿನ್ನ ಬದುಕು ನಿನ್ನಾಯ್ಕೆ ಅಷ್ಟೇ. ಭಾವದ ಜೀವಂತಿಕೆ ಎಲ್ಲರಿಗೂ ಸಾಧ್ಯವಿಲ್ಲಾ.

ಯಾರನ್ನೂ ಮೆಚ್ಚಿಸುವ ಹುಚ್ಚಿಗೆ ಬೀಳಬೇಡ ನೀನು ಕಳೆದು ಹೋಗುತ್ತೀಯಾ..
ಮಗು,
ಹಕ್ಕಿಯಂತೆ ಹಾರಾಡು
ಮೀನಿನಂತೆ ಈಜಾಡು
ನವಿಲಿನಂತೆ ಗರಿ ಬಿಚ್ಚಿ ಕುಣಿ
ಕೋಗಿಲೆಯಂತೆ ಮನ ಬಿಚ್ಚಿ ಹಾಡು
ಮುಗಿಲಿನಂತೆ ಸುಮ್ಮನೆ ನಿಂತುಬಿಡು
ಸೂರ್ಯನಂತೆ ಪ್ರಜ್ವಲಿಸು
ನದಿಯಂತೆ ಹರಿದುಬಿಡು
ಸಾಗರದಂತೆ ಘರ್ಜಿಸು
ಮೀನಿನಂತೆ ಈಜಾಡು
ನವಿಲಿನಂತೆ ಗರಿ ಬಿಚ್ಚಿ ಕುಣಿ
ಕೋಗಿಲೆಯಂತೆ ಮನ ಬಿಚ್ಚಿ ಹಾಡು
ಮುಗಿಲಿನಂತೆ ಸುಮ್ಮನೆ ನಿಂತುಬಿಡು
ಸೂರ್ಯನಂತೆ ಪ್ರಜ್ವಲಿಸು
ನದಿಯಂತೆ ಹರಿದುಬಿಡು
ಸಾಗರದಂತೆ ಘರ್ಜಿಸು
ಏನಾದರೂ ಮಾಡು ಆದರೆ ನಿಂಗಾಗಿ ಮಾತ್ರ ಮಾಡು....
ನೆನಪಿರಲಿ ನೀನೆಂದರೆ ನಂಗೆ ಉಸಿರಿನಷ್ಟು ಪ್ರೀತಿ.
No comments:
Post a Comment